बैंगलूरु-कर्नाटकखबरों की खबरचमोली-उत्तराखण्डब्रेकिंग न्यूज़सहसपुर-बिजनोर-उत्तरप्रदेश

ದಿವಂಗತ ಮುತ್ತಪ್ಪ ರೈ ಅವರ ಆದರ್ಶಗಳನ್ನು ಅನುಸರಿಸಿ, ಅವರ ಗುರಿ ಮತ್ತು ಕನಸುಗಳನ್ನು ನನಸಾಗಿಸುವುದು ನನ್ನ ಗುರಿ – ಬಿ.ಎನ್.ಜಗದೀಶ್

WhatsApp Image 2026-04-18 at 09.08.39
previous arrow
next arrow

ದಿವಂಗತ ಮುತ್ತಪ್ಪ ರೈ ಅವರ ಆದರ್ಶಗಳನ್ನು ಅನುಸರಿಸಿ, ಅವರ ಗುರಿ ಮತ್ತು ಕನಸುಗಳನ್ನು ನನಸಾಗಿಸುವುದು ನನ್ನ ಗುರಿ – ಬಿ.ಎನ್.ಜಗದೀಶ್

ಕರ್ನಾಟಕ ರಾಜ್ಯವನ್ನು ಗುರುತಿಸುವಲ್ಲಿ ಜೈ ಕರ್ನಾಟಕ ಸಂಘಟನೆಯ ಪ್ರಮುಖ ಪಾತ್ರ.-ಡಿಕೆ ಶಿವಕುಮಾರ್

ಕರ್ನಾಟಕ ರಾಜ್ಯದಲ್ಲಿ ಜೈ ಕರ್ನಾಟಕ ಸಂಘಟನೆಯು ರಾಜ್ಯದ ನೆಲ, ಜಲ, ಭಾಷೆಯ ಹೋರಾಟದಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದೆ.

ಬೆಂಗಳೂರು :- ಜಯಕರ್ನಾಟಕ ಸಂಘಟನೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡಿಗ ಸಮಾವೇಶವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು, ದೇಶ, ವಿದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ ಜಯಕರ್ನಾಟಕ ಸಂಘಟನೆ ಆಯೋಜಿಸಿದ್ದ ವಿಶ್ವ ಕನ್ನಡ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ವಿ.ಸದಾನಂದಗೌಡ, ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಸಾಮಾಜಿಕ ಕಾರ್ಯಕರ್ತೆ ಮಮತಾ ಆರ್. ಹಾಗೂ ಸಂಘಟನೆಯ ಎಲ್ಲ ರಾಜ್ಯ ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷ ಹರೀಶ್ ಆರ್. ಉಪಸ್ಥಿತ ರಿದ್ದರು.

ಜಯಕರ್ನಾಟಕ ಸಂಘಟನೆಯನ್ನು 15 ವರ್ಷಗಳ ಹಿಂದೆ ದಿವಂಗತ ಮುತ್ತಪ್ಪ ರೈ ಅವರು ಪ್ರಾರಂಭಿಸಿದರು.
ಕನ್ನಡ ಭಾಷೆ, ಜಲ, ಕನ್ನಡ ನೆಲಕ್ಕಾಗಿ ಶ್ರಮಿಸುವುದುಠ ಮತ್ತು ರಾಜ್ಯದ ಜನರ ಸಾಮಾಜಿಕ ಹೋರಾಟಗಳಲ್ಲಿ ನ್ಯಾಯಕ್ಕಾಗಿ ಹೋರಾಡುವುದು ಕರ್ನಾಟಕದ ಗುರಿಯಾಗಿದೆ ರಾಜ್ಯದ ನೆಲ, ಜಲ, ಭಾಷೆಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿಡ ಜಯಕರ್ನಾಟಕ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.


ಇದೇ ಸಮಯದಲ್ಲಿ ಸಂಸದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಯುವಕರಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ, ಆದರೆ ಅದನ್ನು ಅನುಸರಿಸುವ ಯುವಕರಲ್ಲಿ ಕೊರತೆಯಿದೆ, ಜೈ ಕರ್ನಾಟಕ ಸಂಘಟನೆ ಯುವಕರಲ್ಲಿ ಉತ್ಸಾಹ, ಹೊಸ ಚೈತನ್ಯ ಮೂಡಿಸಿದೆ ಎಂದು ತಿಳಿಸಿದರು
ಐಪಿಎಸ್ ಭಾಸ್ಕರ್ ರಾವ್ ಮಾತನಾಡಿ, ಜಯಕರ್ನಾಟಕ ಸಂಘಟನೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಬೆಳೆಸುವ ಮೂಲಕ ಇಡೀ ರಾಷ್ಟ್ರದ ಉನ್ನತಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷರು ಅತಿಥಿಗಳಿಗೆ ಧನ್ಯವಾದ ಅರ್ಪಿಸಿ ಮಾತನಾಡಿ, ದಿವಂಗತ ಮುತ್ತಪ್ಪ ರೈ ಅವರು ತೋರಿದ ಮಾರ್ಗದಲ್ಲಿ ಸಂಸ್ಥೆಯು ಸಂಸ್ಥೆಯ ಆದರ್ಶ, ಗುರಿಗಳನ್ನು

ಅರಿತುಕೊಂಡು ಮುಂದೆಯೂ ಜನರ ಹಿತ ಮತ್ತು ನ್ಯಾಯಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಸಂಘವು ಹೋರಾಡುತ್ತಲೇ ಇರುತ್ತದೆ.
ಈ ಸಮಾರಂಭದಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

100% LikesVS
0% Dislikes

Related Articles

Leave a Reply

Your email address will not be published. Required fields are marked *

Back to top button