
ಭೂಕಬಳಿಕೆದಾರರಿಂದ ಬಡವರ ರಕ್ಷಣೆ ಮಾಡಿ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಪ್ರಸ್ ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.
ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರ,ಉಪಾಧ್ಯಕ್ಷರಾದ ಸುರೇಶ್ ಗೌಡ,ಮಹಿಳಾ ಘಟಕ ಉಪಾಧ್ಯಕ್ಷರಾದ ಶಾರದಗೌಡ,ಜಿಲ್ಲಾಧ್ಯಕ್ಷೆ ಆನೂರಾಧ ರವರು,ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀನಿವಾಸ್,ಯುವ ಘಟಕದ ಅಧ್ಯಕ್ಷರಾದ ರಾಘವ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು
ರಾಜ್ಯಾಧ್ಯಕ್ಷರಾದ ನಿಂಗರಾಜಗೌಡ್ರರು ಮಾತನಾಡಿ ಜನಪರ,ದೀನದಲಿತರ ಪರ ಮಹಿಳೆಯರ,ರೈತ ಪರ ಹೋರಾಟದಲ್ಲಿ ನಮ್ಮ ಸಂಘ ಅವಿರತವಾಗಿ ಹೋರಾಟ ಮಾಡುತ್ತಾ ಬರುತ್ತಿದೆ.
ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ರಾಯಸಂದ್ರ ಸರ್ವೆ ನಂಬರ್ ನಲ್ಲಿ ಸರ್ಕಾರದ ಜಾಗವಿದೆ.
ಸರಿ ಸುಮಾರು ನೂರಾರು ಕುಟುಂಬಗಳು ಮತ್ತು ರೈತಾಪಿ ವರ್ಗದವರು ,ದಲಿತ ಸಮುದಾಯದವರು ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ.
ಆಧಾರ ಕಾರ್ಡ್,ವಿದ್ಯುತ್ ಸಂಪರ್ಕವಿದೆ ನಾವು ವಾಸ ಮಾಡುವ ಜಾಗವನ್ನು ನಮಗೆ ನೆಲಸಲು ಅವಕಾಶ ಮಾಡಿಕೊಡಿ ಎಂದು ಹಲವಾರು ವರ್ಷಗಳಿಂದ ಮನವಿ ಮಾಡಿದರು ಅದರೆ
ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ,ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಸ್ವತ್ತಿನ ಸ್ಕೆಚ್ ಅನ್ನು ಬದಲಾವಣೆ ಮಾಡುತ್ತಿದ್ದಾರೆ.
ಕೆಲವು ಭೂಕಬಳಿಕೆದಾರರು,
ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಬಡವರ ಮೇಲೆ ದೌರ್ಜನ್ಯ ವೆಸಗುತ್ತಿದ್ದಾರೆ ರಾಯಸಂದ್ರ 14ಮಹಿಳೆಯರನ್ನ ಪೊಲೀಸ್ ಠಾಣೆಗೆ ಕರೆಸಿ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ ಇದರ ವಿರುದ್ದ 20ನೇ ತಾರೀಖು ದೇವನಹಳ್ಳಿಯಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.


















