बैंगलूरु-कर्नाटक

ಜನಪರ ಆಡಳಿತ ನೀಡಿದ,ಜನರ ಸರ್ಕಾರ ನಮ್ಮದು-

Bengaluru-Vijay kumar

WhatsApp Image 2026-04-18 at 09.08.39
previous arrow
next arrow

ಜನಪರ ಆಡಳಿತ ನೀಡಿದ,ಜನರ ಸರ್ಕಾರ ನಮ್ಮದು-ವಸತಿ ಸಚಿವ ವಿ.ಸೋಮಣ್ಣ

ಫ್ಲೈ ಓವರ್ ಕಾಮಗಾರಿ ಮತ್ತು ಪೊಲೀಸ್ ಕ್ವಾಟ್ರಸ್ ಹೈಟೆಕ್ ಶಾಲೆಯ ಕಾಮಗಾರಿ ಪರಿವೀಕ್ಷಣೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಡಾ|| ರಾಜಕುಮಾರ್ ವಾರ್ಡಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಫ್ಲೈಓವರ್ ಕಾಮಗಾರಿ ಮತ್ತು ಪೊಲೀಸ್ ಕ್ವಾಟ್ರಸ್ ನಲ್ಲಿ ಪ್ರೌಡಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನ ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು ಪರಿವೀಕ್ಷಣೆ ನಡೆಸಿದರು.

ಮುಖ್ಯ ಅಭಿಯಂತರುಗಳಾದ ಡೊಡ್ಡಯ್ಯ ಲೋಕೇಶ್ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ,ಶ್ರೀಮತಿ ರೂಪಲಿಂಗೇಶ್ವರ್ ಹಾಗೂ ಬಿ.ಜೆ.ಪಿ.ಮುಖಂಡರಾದ ಡೊಡ್ಡವೀರಯ್ಯರವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಮ ವರ್ಗ ಮತ್ತು ಬಡವರು ವಾಸ ಮಾಡುವವರ ಸಂಖ್ಯೆ ಹೆಚ್ಚಿದೆ .ಕಳೆದು ನಾಲ್ಕು ವರ್ಷದಲ್ಲಿ ಕ್ಷೇತ್ರದ ಜನತಗೆ ರಸ್ತೆ,ಪಾರ್ಕ್ ಮತ್ತು ಶಾಲೆ ಆಸ್ಪತ್ರೆ,ಉದ್ಯಾನವನ,ಕುಡಿಯುವ ನೀರು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಜನರ ಸಮಸ್ಯೆಗಳ ಅರಿತು,ಅವರ ಬೇಕಾದ ಸೌಲಭ್ಯಗಳನ್ನು ಯೋಜನೆಗಳನ್ನು ರೂಪಿಸಿ ಆನುಷ್ಠಾನಗೊಳಿಸಲಾಗುತ್ತಿದೆ.

ಮಹಾಲಕ್ಷ್ಮೀಲೇಔಟ್,ರಾಜಾಜಿನಗರ,ಮಲ್ಲೇಶ್ವರಂ,ಆರ್.ಆರ್.ನಗರ,ಯಶವಂತಪುರ ಭಾಗಗಳಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ವಿಜಯನಗರ,ಮೈಸೂರು ರಸ್ತೆಗೆ ಹೋಗಲು ಸುಗಮ ವಾಹನ ಸಂಚಾರಕ್ಕೆ ಮೇಲು ಸೇತುವೆ ನಿರ್ಮಾಣ ಶರವೇಗದಿಂದ ಸಾಗುತ್ತಿದೆ ಮುಂದಿನ ತಿಂಗಳು ಲೋಕರ್ಪಣೆಯಾಗಲಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು,ಅವರ ಉತ್ತಮ ಶಿಕ್ಷಣ ವ್ಯವಸ್ಥೆ ಲಭಿಸಬೇಕು ಪೊಲೀಸ್ ಕ್ವಾಟ್ರಸ್ ನಲ್ಲಿ ಮೂರು ಮಹಡಿಯ ಸುಸ್ಜಜಿತ ಹೈಟೆಕ್ ಶಾಲೆ ನಿರ್ಮಾಣ ಹಂತದಲ್ಲಿದೆ.

ಸಾರ್ವಜನಿಕರ ಸಮಸ್ಯೆಗಳು ನಿವಾರಣೆ ನೆಮ್ಮದ್ದಿ ಜೀವನ ಸಾಗಿಸಬೇಕು ಅದುವೇ ನಮ್ಮ ಉದ್ದೇಶ.

ಜನಪರ ಆಡಳಿತ ನೀಡಿದ ,ಜನರ ಸರ್ಕಾರ ನಮ್ಮದು ನಮ್ಮ ಪ್ರತಿಯೊಂದು ಎಲ್ಲ ವರ್ಗ,ಧರ್ಮದವರಿಗೆ ತಲುಪುವಂತಹ ಯೋಜನೆಗಳಾಗಿವೆ ಎಂದು ಹೇಳಿದರು.

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button