बैंगलूरु-कर्नाटक

ಜನರು ಭಯಪಡುವ ಅವಶ್ಯಕತೆ ಇಲ್ಲ ಸರ್ಕಾರ ನಿಮ್ಮ ಜೊತೆಯಲ್ಲಿ ಇದೆ

Bengaluru-Vijay Kumar

WhatsApp Image 2026-04-18 at 09.08.39
previous arrow
next arrow

ಜನರು ಭಯಪಡುವ ಅವಶ್ಯಕತೆ ಇಲ್ಲ ಸರ್ಕಾರ ನಿಮ್ಮ ಜೊತೆಯಲ್ಲಿ ಇದೆ

ರಾಜಕೀಯ ನಿಂತ ನೀರಲ್ಲ,ಸಾಧನೆ ಮಾಡುವುದು ಮುಖ್ಯ-ವಸತಿ ಸಚಿವ ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ಕಾವೇರಿಪುರ ವಾರ್ಡ್‌ ವ್ಯಾಪ್ತಿಯಲ್ಲಿ
ನೂತನವಾಗಿ ನಿರ್ಮಿಸಿರುವ


ತ್ಯಾಜ್ಯ ನೀರು ಸಂಸ್ಕರಣ ಘಟಕ ಹಾಗೂ ಬಿ.ಬಿ.ಎಂ.ಪಿ ಪದವಿಪೂರ್ವ ಕಾಲೇಜು
ಎರಡನೇ ಅಂತಸ್ತಿನ ಕೊಠಡಿ, ಗಣಕ ವಿಜ್ಞಾನ ಪ್ರಯೋಗಾಲಯದ
ಉದ್ಘಾಟನೆಯನ್ನು ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು ನೇರವೆರಿಸಿದರು.

ವಸತಿ ಸಚಿವ ವಿ.ಸೋಮಣ್ಣರವರು ಮಾತನಾಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕೃಪಾ ಆಶೀರ್ವಾದದಿಂದ ಜನ ಸೇವೆ ಮಾಡುತ್ತಿದ್ದೇನೆ.

ಬಾಲಗಂಗಾಧರನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬಾಳಯ್ಯನ ಕೆರೆ ಅಭಿವೃದ್ದಿ ಪಡಿಸಲಾಗಿದೆ.

ಪ್ರತಿಭೆ ಯಾರ ಮನೆಯ ಸ್ವತ್ತಲ್ಲ,ಪ್ರತಿಭೆಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲು.

ಪದವಿಪೂರ್ವ ಕಾಲೇಜ್ ಆನ್ನು ಉನ್ನತಿಕರಣ ಮಾಡಿ ಕಂಪ್ಯೂಟರ್ ತರಭೇತಿ ಕೇಂದ್ರ ಆರಂಭಿಸಲಾಗಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ನೀಡಲು.
ಪ್ರಥಮ ದರ್ಜೆ ಕಾಲೇಜುನ್ನು 10ಕೋಟಿ ರೂಪಾಯಿ ವೆಚ್ಚದಲ್ಲಿ 1200ಮಕ್ಕಳಿಗೆ ಕಟ್ಟಡವನ್ನು ಮಾನಸನಗರ ನಿರ್ಮಿಸಲಾಗಿದೆ.

ನಾಯಂಡಹಳ್ಳಿ,ಪಂತರಪಾಳ್ಯ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ.

ಶಿಕ್ಷಣಕ್ಕೆ ಆದ್ಯತೆ ನೀಡಿ,ತಂತ್ರಜ್ಞಾನ ಆಳವಡಿಕೆ ಮೂಲಕ ಶಿಕ್ಷಣಕ್ಕೆ ಪ್ರಾಧ್ಯನತೆ ಕೊಡಲಾಗಿದೆ.

ಸಾಮಾನ್ಯ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ನೀಡಲು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಿಕ್ಷಣ ಸಂಸ್ಥೆಯಾಗಿ ನಿರ್ಮಿಸಲಾಗಿದೆ.

ಮಾರುತಿನಗರ,ಕನಕಭವನದಲ್ಲಿ ಡಯಾಲಿಸಿಸ್ ಸೆಂಟರ್ ಬಿ.ಪಿ.ಎಲ್.ಕಾರ್ಡ್ ದಾರರಿಗೆ ಉಚಿತ.

ಕನಕಭವನ 13ಕೋಟಿ ವೆಚ್ಚದಲ್ಲಿ ಐ.ಎ.ಎಸ್.ಮತ್ತು ಐ.ಪಿ.ಎಸ್.ಪರೀಕ್ಷಾ ತರಭೇತಿ ಕೇಂದ್ರ ಆರಂಭಿಸಲಾಗುವುದು ಕನಕ ಭವನ ಕಟ್ಟಡವನ್ನು ಕಾಗಿನೆಲೆ ಗುರುಪೀಠಕ್ಕೆ ಹಸ್ತಾಂತರ ಮಾಡಲಾಗುವುದು.

ಭಯಪಡುವ ಅವಶ್ಯಕತೆ ಇಲ್ಲ,ಸರ್ಕಾರದ ಸೌವಲತ್ತು ಗಳನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ.

61ದೇವಸ್ಥಾನ,79ಶುದ್ದ ಕುಡಿಯುವ ನೀರು 50ಪಾರ್ಕ್ ಗಳನ್ನು ಲೋಕರ್ಪಣೆ ಮತ್ತು ನವೀಕರಣ ಮಾಡಲಾಗಿದೆ.

ನಾಯಂಡಹಳ್ಳಿಯಲ್ಲಿ 3800ಕೋಟಿ ವೆಚ್ಚದಲ್ಲಿ ಮೆಟ್ರೋ ಕಾಮಗಾರಿ.
ಮಾಳಗಾಳ ರಸ್ತೆ ಆಧುನೀಕರಣ.

ಪಂತರಪಾಳ್ಯ ಮತ್ತು ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ .
ದಾಸರಹಳ್ಳಿಯಲ್ಲಿರುವ ಆಸ್ಪತ್ರೆ ಎರಡು ತಿಂಗಳ ಒಳಗೆ ಲೋಕರ್ಪಣೆ ಮಾಡಲಾಗುವುದು.

ವಿದ್ಯಾವಂತ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು
ಪ್ರಧಾನಿ ನರೇಂದ್ರಮೋದಿರವರು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ ವಿದ್ಯಾಸಿರಿ ಯೋಜನೆಯ ಮೂಲಕ 40ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ.

ರಾಜಕಾರಣ ನಿಂತ ನೀರಲ್ಲ,ಹರಿಯುವ ನೀರು ನಾವು ಮಾಡುವ ಸಾಧನೆ ಮುಖ್ಯ ಎಂದು ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡರು, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಪಲ್ಲವಿ ಚನ್ನಪ್ಪ,ವಾಗೇಶ್,ದಾಸೇಗೌಡ,ಶ್ರೀಮತಿ ರೂಪ ಲಿಂಗೇಶ್ವರ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಧಿಕಾರಿ ,ನೌಕರರ ಸಂಘದ ಉಪಾಧ್ಯಕ್ಷರಾದ ಡಾ||ಎಂ.ಸೋಮಶೇಖರ್, ಕೆ.ಹೆಚ್.ಬಿ.ಮಾಜಿ ಅಧ್ಯಕ್ಷ ಕುಮಾರ್,ಬಿ.ಜೆ.ಪಿ.ಮುಖಂಡರುಗಳಾದ ರಾಜಪ್ಪ,ಶ್ರೀಧರ್ ,ಮಲ್ಲಿಕಾರ್ಜುನ,ರವರು ಭಾಗವಹಿಸಿದ್ದರು.

100% LikesVS
0% Dislikes

Related Articles

Leave a Reply

Your email address will not be published. Required fields are marked *

Back to top button