ಶ್ರೀ ರಹೀಂಖಾನ ಶಾಸಕರು ಬೀದರ ಉತ್ತರ ಹಾಗೂ ಮಾಜಿ ಸಚಿವರು
ಹಳ್ಳದಕೇರಿ ೮೮ ಟೀ ಪಾರ್ಕ್, ನರ್ಸರಿ, ದೇವದೇವನಕ್ಕೆ
ಶಾಸಕರಾದ ರಹೀಂ ಖಾನ್ ಅನಿರೀಕ್ಷಿತ ಭೇಟಿ: ಪರಿಶೀಲನೆ
ಬೀದರ ಫೆಬ್ರವರಿ ೦೯ (ಕರ್ನಾಟಕ ವಾರ್ತೆ): ಶಾಸಕರಾದ ರಹೀಂ ಖಾನ್ ಅವರು ಫೆ.೯ರಂದು ಶಹಾಪೂರ ಗೇಟ ಹತ್ತಿರದಲ್ಲಿನ ಹಳ್ಳದಕೇರಿ ೮೮ ಟೀ ಪಾರ್ಕ್ಗೆ ಭೇಟಿ ನೀಡಿದರು.
ಶಾಸಕರು ಇದೆ ಸಂದರ್ಭದಲ್ಲಿ ಗಾರ್ಡನದಲ್ಲಿ ಇರುವ ಮಕ್ಕಳ ಉದ್ಯಾನದಲ್ಲಿ ಕೆಲ ಸಮಯ ಸಂಚರಿಸಿದರು. ಅಲ್ಲಿದ್ದ ಔಷಧಿ ಸಸಿಗಳ ಉಪಯೋಗದ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಾರ್ಕನಲ್ಲಿ ಕುಡಿಯುವ ನೀರಿನ ಸೌಕರ್ಯ ಇದೆಯಾ ಎಂದು ಕೇಳಿ ಮಾಹಿತಿ ಪಡೆದರು. ತಾವೇ ಖುದ್ದು ನೀರು ಕುಡಿದು ಪರೀಕ್ಷಿಸಿದರು.
ಗಾರ್ಡನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ಇದೆ ವೇಳೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಿಟಿ ಜನರಲ್ಲಿ ಶಾಸಕರ ಮನವಿ: ಶಹಾಪೂರ ರೈಲ್ವೆ ಗೇಟ್ ಹತ್ತಿರದ ಹಳ್ಳದಕೇರಿ ೮೮ ಟೀ ಪಾರ್ಕ್ಗೆ ತಾವು ಖುದ್ದು ಭೇಟಿ ನೀಡಿದ್ದು, ಇದು ಅಂದಾಜು ೨೫ ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಇರುತ್ತದೆ. ಇಲ್ಲಿ ಬೆಳಗ್ಗೆ ಸಾರ್ವಜನಿಕರು ವಾಕ್ ಮಾಡಬಹುದು. ಚಿಕ್ಕಮಕ್ಕಳಿಗೆ ಆಟವಾಡಲು ಅನುಕೂಲವಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಬೀದರ ನಗರದ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ದೇವದೇವ ಗಾರ್ಡನ್‌ಗೆ ಭೇಟಿ: ಇದಕ್ಕು ಮೊದಲು ಶಾಸಕರು ದೇವದೇವ ವನದಲ್ಲಿರುವ ಗಾರ್ಡನ್‌ಗೆ ಭೇಟಿ ನೀಡಿದರು. ಈ ಗಾರ್ಡನ್ ಮೊದಲಿಗಿಂತಲೂ ಈಗ ತುಂಬಾ ಪ್ರಗತಿಯಾಗಿದೆ. ನೋಡಲು ಸುಮಧುರವಾಗಿದೆ. ಅತ್ಯುತ್ತಮ ಪರಿಸರ ಇಲ್ಲಿದೆ. ಇಲ್ಲಿಗೆ ಕೂಡ ಸಾರ್ವಜನಿಕರು ಭೇಟಿ ಕೊಡಬೇಕು ಎಂದು ತಿಳಿಸಿದರು.
ನರ್ಸರಿ ಬಗ್ಗೆ ತಿಳಿಸಿ: ಶಹಾಪೂರ ಗೇಟ್ ಹತ್ತಿರದಲ್ಲಿರುವ ನರ್ಸರಿವೊಂದಕ್ಕೆ ಕೂಡ ಶಾಸಕರು ಭೇಟಿ ನೀಡಿದರು. ರೈತರಿಗೆ ಶ್ರೀಗಂಧ, ಹೆಬ್ಬೆವು, ಕರಿಬೇವು ಮತ್ತು ಲಿಂಬೆ ಇತರೆ ಜಾತಿಯ ಗಿಡಗಳನ್ನು ರೈತರಿಗಾಗಿ ಬೆಳೆಸಲಾಗಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ಹಾಗೆ ಕೂಡ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ಪ್ರವೀಣಕುಮಾರ ಮೋರೆ ಅವರು ಶಾಸಕರಿಗೆ ಮಾಹಿತಿ ನೀಡಿದರು. ಇಲ್ಲಿನ ನರ್ಸರಿಯಿಂದ ಸಾರ್ವಜನಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಎಂದು ಶಾಸಕರು ಅಧಿಕಾರಿಗಳಗೆ ಸೂಚಿಸಿದರು. ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಇರುವ ಸೌಕರ್ಯಗಳ ಬಗ್ಗೆ ಕೂಡ ತಿಳಿಸಲು ಶಾಸಕರು ಸಲಹೆ ಮಾಡಿದರು.
ಹೊಸ ಬಡಾವಣೆಗಳಲ್ಲಿ ಸಸಿ ನೆಡಿ: ಬೀದರ ಸಿಟಿನಲ್ಲಿ ಹೊಸದಾಗಿ ಏಳುವ ಬಡಾವಣೆಗಳಲ್ಲಿ ಕಡ್ಡಾಯ ಸಸಿಗಳನ್ನು ನೆಡಬೇಕು. ಜನರಿಗೆ ನೆರಳು ಆಗುವಂತಹ ಹೂ ಹಣ್ಣಿನ ಗಿಡಗಳನ್ನು ನೆಡಲು ಒತ್ತು ಕೊಡಬೇಕು ಎಂದು ಶಾಸಕರಾದ ರಹೀಂ ಖಾನ್ ಅವರು ಇದೆ ವೇಳೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಪ್ರವೀಣಕುಮಾರ ಮೋರೆ, ಸದಾನಂದ ಮತ್ತು ಅರಣ್ಯ ಇಲಾಖೆಯ ಇನ್ನೀತರ ಸಿಬ್ಬಂದಿ ಇದ್ದರು.




























