ಬಿ.ಬಿ.ಎಂ.ಪಿ.ಚುನಾವಣೆ ತತಕ್ಷಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ಮನವಿ
Bangaluru-Vijay kumar

ಬಿ.ಬಿ.ಎಂ.ಪಿ.ಚುನಾವಣೆ ತತಕ್ಷಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ಮನವಿ
ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಬಿ.ಬಿ.ಎಂ.ಪಿ.ಚುನಾವಣೆ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ,ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜುನ್,ಬಿ.ಬಿ.ಎಂ.ಪಿ.ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಸತ್ಯನಾರಾಯಣ್ ಮೋಹನ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.
ಎಮ್.ಶಿವರಾಜುರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಬಿ.ಬಿ.ಎಂ.ಪಿ.ಚುನಾವಣೆ ನೆನೆಗುದಿಗೆ ಬಿದ್ದಿತ್ತು.
ಅದರೆ ಸುಪ್ರೀಂಕೋರ್ಟ್ ದಿನಾಂಕ 28ನೇ ತಾರೀಖು ಮಹತ್ವ ಆದೇಶ ನೀಡಿ ಒಂದು ವಾರದೊಳಗೆ ಮೀಸಲಾತಿ ಪ್ರಕಟನೆ ಮಾಡಿ,ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಿದೆ.
ಅಧಿಕಾರ ವಿಕೇಂದ್ರೀಕರಣ ವಿರೋಧಿ ನಿಲುವು ಮತ್ತು ಬಿ.ಬಿ.ಎಂ.ಪಿ.ಚುನಾವಣೆ ಮುಂದೂಡಿಕೆ ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ.
ವಾರ್ಡ್ ವಿಂಗಡನೆ ,ಮೀಸಲಾತಿ ಮಾಡಲು 8ವಾರ ಗಡುವು ನೀಡಿದರು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಚುನಾವಣೆ ಸಂದರ್ಭದಲ್ಲಿ 1600ಕೋಟಿ ರಾಜಕಾಲುವೆ ದುರಸ್ತಿ ಬರಿ ಬಿ.ಜೆ.ಪಿ.ಶಾಸಕರುಗಳಿಗೆ ಮಾತ್ರ ನೀಡಿದ್ದಾರೆ.
ಬಿ.ಜೆ.ಪಿ.ಸಚಿವರು ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ.
ಸುಪ್ರಿಂಕೋರ್ಟ್ ಆದೇಶ ನೀಡಿದರು ಚುನಾವಣೆ ಮಾಡಲು ಹಿಂದೇಟು ಹಾಕುತ್ತಿದೆ.
ಚುನಾವಣೆ ಮುಂದೂಡಿಕೆ ಮಾಡಿದರೆ ಚುನಾವಣೆ ಆಯೋಗಕ್ಕೆ ಛೀಮಾರಿ ಖಚಿತ.
ಒಂಟಿ ಮನೆ ಯೋಜನೆಗೆ ಅನುದಾನವಿಲ್ಲ,ಕಲ್ಯಾಣ ಕಾರ್ಯಕ್ರಮಗಳು ನಿಂತಿದೆ .
ಜನವಿರೋಧಿ ನಿಲುವುವಿನಿಂದ ಬೆಂಗಳೂರುನಗರ ಜನರು ನರಳುತ್ತಿದ್ದಾರೆ ಎಂದು ಹೇಳಿದರು.
ಅಬ್ದುಲ್ ವಾಜಿದ್ ರವರು ಸುಪ್ರೀಂಕೋರ್ಟ್ ಒಂದು ವಾರ ಅವಕಾಶ ನೀಡಿ ಮೀಸಲಾತಿ ಪಟ್ಟಿ ಪ್ರಕಟನೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ ಅದರೆ ಸರ್ಕಾರ ಮುಂದೂಡಿಕೆಗೆ ತಂತ್ರ ರೂಪಿಸುತ್ತಿದೆ.
ಬಿ.ಜೆ.ಪಿ.ಶಾಸಕರು ಹೇಳುವ ಮೀಸಲಾತಿ ಪಟ್ಟಿ ಮಾಡಬೇಡಿ ,ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಾತಿ ಮಾಡಿ.
ಬೆಂಗಳೂರುನಗರದ 7ಸಚಿವರು ಇದ್ದಾರೆ ಅವರು ಬೆಂಗಳೂರು ನಗರದ ಅಭಿವೃದ್ದಿ ಕಡೆ ಗಮನಹರಿಸುತ್ತಿಲ್ಲ.
ಎರಡು ವರ್ಷದ ಸರ್ಕಾರದ ಸಾಧನೆ ಶೂನ್ಯ .
ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಸಮರ್ಪಕ ತಲುಪಿಸುವಂತೆ ಮಾಡಲು ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಮುಖ್ಯ ಎಂದು ಹೇಳಿದರು.


















