बैंगलूरु-कर्नाटक

ವಸತಿ ಸಚಿವ ವಿ.ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ 3000ಸಾವಿರ ಮಹಿಳೆಯರಿಗೆ ಸೀರೆ,250ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 150ಆಟೋ ಚಾಲಕರಿಗೆ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರ ನೇತೃತ್ವದಲ್ಲಿ ವಿತರಣೆ

WhatsApp Image 2026-04-18 at 09.08.39
previous arrow
next arrow

ವಸತಿ ಸಚಿವ ವಿ.ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ 3000ಸಾವಿರ ಮಹಿಳೆಯರಿಗೆ ಸೀರೆ,250ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 150ಆಟೋ ಚಾಲಕರಿಗೆ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರ ನೇತೃತ್ವದಲ್ಲಿ ವಿತರಣೆ

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರ ನೇತೃತ್ವದಲ್ಲಿ 3000ಸಾವಿರ ಮಹಿಳೆಯರಿಗೆ ಸೀರೆ ಮತ್ತು 250ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 150ಆಟೋ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಿಸಲಾಯಿತು.

ವಿಜಯನಗರ ವಿಧಾನಸಭಾ ಕ್ಷೇತ್ರದ ವಿಜಯನಗರ,ಹೊಸಹಳ್ಳಿ ಮತ್ತು ಕೆ.ಪಿ.ಅಗ್ರಹಾರದ ಪ್ರದೇಶದಲ್ಲಿ ವಿತರಣೆ ಕಾರ್ಯಕ್ರಮ ನೇರವೇರಿತು.

ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರು ಮಾತನಾಡಿ ವಸತಿ ಸಚಿವರಾದ ವಿ.ಸೋಮಣ್ಣರವರು ಅಜಾತಶತ್ರು, ಬಡವರ ಬಂಧು ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಯಲ್ಲಿ ಮಹತ್ವವಾದ ಕೊಡುಗೆಯನ್ನ ವಿ.ಸೋಮಣ್ಣ ನೀಡಿದ್ದಾರೆ.

ಬಡವರ ಸೂರು ಭಾಗ್ಯ ಕಲ್ಪಿಸಿದ ವಿ.ಸೋಮಣ್ಣ ರವರು ಲಕ್ಷಾಂತರ ಜನರ ಜೀವನಾಡಿಯಾಗಿದ್ದಾರೆ.

ಬಡವರ ಸೇವೆ ಮಾಡುವುದು,ಬಡವರ ಕಣ್ಣಿರಿಗೆ ಆಸರೆಯಾಗಬೇಕು ಎಂದು ಕಳೆದ 40ವರ್ಷಗಳಿಂದ ನಿರಂತರ ಜನಸೇವೆ ಮಾಡುತ್ತಾ ಬಂದಿರುವ ಕಾಯಕಯೋಗಿ ವಿ.ಸೋಮಣ್ಣರವರ ಮಾರ್ಗದರ್ಶನದಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ಮುಖಂಡರುಗಳು ಪಾಲ್ಗೊಂಡಿದ್ದರು.

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button