ಬಡವರಾಗಿ ಹುಟ್ಟಿರಬಹುದು,ಬಡವರಾಗಿ ಜೀವನ ಸಾಗಿಸಬಾರದು ಆರ್ಥಿಕವಾಗಿ ಹಿಂದುಳಿದವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ನನ್ನ ಉದ್ದೇಶ-ಸಚಿವ ವಿ.ಸೋಮಣ್ಣ

ಬಡವರಾಗಿ ಹುಟ್ಟಿರಬಹುದು,ಬಡವರಾಗಿ ಜೀವನ ಸಾಗಿಸಬಾರದು ಆರ್ಥಿಕವಾಗಿ ಹಿಂದುಳಿದವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ನನ್ನ ಉದ್ದೇಶ-ಸಚಿವ ವಿ.ಸೋಮಣ್ಣ
ಅಖಿಲ ಕರ್ನಾಟಕ ಶ್ರೀ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ ಸುಮನಹಳ್ಳಿ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅಗತ್ಯ ವಸ್ತುಗಳು ವಿತರಣಾ ಕಾರ್ಯಕ್ರಮ.
ವಸತಿ ಸಚಿವರಾದ ವಿ.ಸೋಮಣ್ಣರವರು,ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು,ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡರು,ಬಿ.ಜೆ.ಪಿ.ಮುಖಂಡರಾದ ವೇಣುಗೌಡರವರು ನಿರಾಶ್ರಿತರಿಗೆ ಅಗತ್ಯ ವಸ್ತುಗಳಾದ ಹಾಸಿಗೆ,ಬೆಡ್ ಶೀಟ್,ಸೋಪ್,ಹಣ್ಣುಗಳು ದಿನಬಳಕೆ ವಸ್ತುಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಮತ್ತು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರು ಆದರ್ಶ ಸಿದ್ದಾಂತ, ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ.
ಬಡವರಾಗಿ ಹುಟ್ಟಿರಬಹುದು ಅದರೆ ಬಡವರಾಗಿ ಜೀವನ ಸಾಗಿಸಬಾರದು ಎಂಬ ಉದ್ದೇಶದಿಂದ ನಮ್ಮ ಪ್ರತಿಯೊಂದು ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಸಮಾಜದ ಮುಖ್ಯವಾಹಿನಿ ತರಬೇಕು ಅವರ ಸಹ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಬೇಕು ಎಂದು ವಸತಿ ಇಲಾಖೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ,ಆರೋಗ್ಯ ಪರಿಸರದ ಬಗ್ಗೆ ಗಮನಹರಿಸಿ ಗರ್ಭಿಣಿ ಸ್ತ್ರಿಯರು ಆರೋಗ್ಯ ತಪಾಸಣೆ ಮತ್ತು ಹೆರಿಗೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿತು.
ನಮ್ಮ ಕ್ಷೇತ್ರದಲ್ಲಿ ರೆಫರಲ್ ಆಸ್ಪತ್ರೆಯಿಂದ 500ರೂಪಾಯಿ ವೆಚ್ಚದಲ್ಲಿ ಗರ್ಭಿಣಿ ಸ್ತ್ರಿಯರ ಚಿಕಿತ್ಯೆ,ತಪಾಸಣೆ ಮತ್ತು ಪ್ರಸವ ಮಾಡಿಸಲಾಗುತ್ತಿದೆ
ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲ ವಾರ್ಡ್ ಗಳಲ್ಲಿ ಸ್ಥಾಪನೆ.
ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ,ವ್ಯಾಯಾಮ ಕೇಂದ್ರ ಆರಂಭಿಸಲಾಗಿದೆ.
ಶಿಕ್ಷಣದ ಬಗ್ಗೆ ಗಮನಹರಿಸಿ ಪ್ರತಿ ವಾರ್ಡ್ ನಲ್ಲಿ ಹೈಟೆಕ್ ಗ್ರಂಥಾಲಯ ಮತ್ತು ಐ.ಎ.ಎಸ್.ಮತ್ತು ಐ.ಪಿ.ಎಸ್.ಹಾಗೂ ಕೆ.ಎ.ಎಸ್.ಪರೀಕ್ಷೆ ಕೇಂದ್ರ ಆರಂಭಿಸಲಾಗಿದೆ.
ಪರಿಸರ ಉಳಿಸಲು 50ಕ್ಕೂ ಹೆಚ್ಚು ಉದ್ಯಾನವನ ನವೀಕರಣ ಮಾಡಲಾಗಿದೆ.
ಜನರ ಆರೋಗ್ಯ, ಶಿಕ್ಷಣ ಅತ್ಯಂತ ಕಡಿಮೆ ವೆಚ್ಚದಲ್ಲಿ ಲಭಿಸಿದರು ದುಡಿಮೆ ಹಣ ಉಳಿತಾಯವಾಗುತ್ತದೆ ಉಳಿತಾಯ ಹಣದಿಂದ ಆರ್ಥಿಕವಾಗಿ ಸಬಲರಾಗುತ್ತಾರೆ.
ನಿರಾಶ್ರಿತರು ಕುಟುಂಬದವರಿಗೆ ಮಾನವೀಯತೆ ಮುಖ್ಯ ,ಹೆತ್ತ ತಂದೆ,ತಾಯಿಯನ್ನ ಬೀದಿಗೆ ತಳ್ಳುವುದು ತಪ್ಪು.
ಸರ್ಕಾರ ನಿರಾಶ್ರಿತರಿಗೆ ಆನಾಥರಾಗಲು ಬಿಡುವುದಿಲ್ಲ,ಅವರ ಆರೋಗ್ಯ ಜೀವರಕ್ಷಣೆ ನಮ್ಮ ಜವಬ್ಬಾರಿ ಎಂದು ಹೇಳಿದರು.
ನಿರಾಶ್ರಿತರ ಪರಿಹಾರ ಕೇಂದ್ರದ ಕಾರ್ಯದರ್ಶಿ ಅರ್ಚನಾ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಾಗೇಶ್ ಹಾಗೂ ಬಿ.ಜೆ.ಪಿ.ಯುವ ಮುಖಂಡ ಬಿ.ಎಂ.ರಾಜಪ್ಪ, ಕನಕಪುರದ ರಾಜಣ್ಣರವರು ಭಾಗವಹಿಸಿದ್ದರು.


















