बैंगलूरु-कर्नाटक

ಕಟ್ಟಡ ಮತ್ತು ಗೃಹ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ ಕಡ್ಡಾಯ ಎಂಬ ಹಿಂದಿನ ಸರ್ಕಾರದ ಜನ ವಿರೋಧಿ ಆದೇಶವನ್ನು ಹಿಂಪಡೆಯುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರಿಗೆ ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಮಹಾನಗರದ ವತಿಯಿಂದ ಅಭಿನಂದನೆ

WhatsApp Image 2026-04-18 at 09.08.39
previous arrow
next arrow

ಕಟ್ಟಡ ಮತ್ತು ಗೃಹ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ ಕಡ್ಡಾಯ ಎಂಬ ಹಿಂದಿನ ಸರ್ಕಾರದ ಜನ ವಿರೋಧಿ ಆದೇಶವನ್ನು ಹಿಂಪಡೆಯುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರಿಗೆ ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಮಹಾನಗರದ ವತಿಯಿಂದ ಅಭಿನಂದನೆ

ಪರಾಗ್ ಹೋಟೆಲು ಸಭಾಂಗಣದಲ್ಲಿ ಬಿ.ಜೆ.ಪಿ.ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥನಾರಾಯಣ್ ರವರು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಬಿ.ನಾರಾಯಣ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ರವರು ಮಾಜಿ ಮಹಾಪೌರರುಗಳಾದ ಎಸ್.ಕೆ.ನಟರಾಜ್ ರವರು,ಕಟ್ಟೆ ಸತ್ಯನಾರಾಯಣ್ ರವರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರರು ಹಾಗೂ ಮಾಜಿ ಉಪ ಮಹಾಪೌರರಾದ ಶ್ರೀ ಎಸ್.ಹರೀಶ್ ರವರು, ಬೆಂಗಳೂರು ಕೇಂದ್ರ ಜಿಲ್ಲಾ ವಕ್ತಾರರಾದ ಶ್ರೀ ಬಿ.ವಿ.ಗಣೇಶ್ ರವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರರಾದ ಶ್ರೀ ರಾಘವೇಂದ್ರ ರಾವ್ ರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಓಸಿ ಹೊಂದಿರಬೇಕು ಎಂಬ ಆದೇಶ ಜಾರಿಗೆ ತಂದಿದ್ದರು. ಈ ಆದೇಶದಿಂದ ಸಾವಿರಾರು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ದೊರೆಯದೆ ಸರ್ಕಾರಕ್ಕೆ ಸರಿಸುಮಾರು 500 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿತ್ತು. ಸಾಲಸೋಲ ಮಾಡಿ ಕಟ್ಟಡ ನಿರ್ಮಿಸಲು ಓ.ಸಿ.ಪಡೆಯಲು ಸಾಧ್ಯವಾಗದ ನೂರಾರು ಮಾಲೀಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಇಂತಹ ಕಾಂಗ್ರೆಸ್ ನ ಜನ ವಿರೋಧಿ ನೀತಿಯಿಂದಾಗಿ ಲಕ್ಷಾಂತರ ಮಂದಿಗೆ ಅನ್ಯಾಯವಾಗಿತ್ತು ಮಾತ್ರವಲ್ಲದೆ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿತ್ತು.

ಕಾಂಗ್ರೆಸ್ ಸರ್ಕಾರದ ಕತ್ತಲೆ ಭಾಗ್ಯ ನಿಯಮವನ್ನು ರದ್ದುಗೊಳಿಸುವಂತೆ ಇಂಧನ ಸಚಿವರಿಗೆ ಬಿಜೆಪಿ ವತಿಯಿಂದ ಮನವಿ ಕೊಟ್ಟಿದೆವು, ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರು ವಿದ್ಯುತ್ ಸಂಪರ್ಕಕ್ಕೆ ಓಸಿ ಕಡ್ಡಾಯವೆಂಬ ಆದೇಶ ರದ್ದುಗೊಳಿಸಿದ ನಿರ್ಧಾರ ರಾಜ್ಯಪತ್ರದ ಮೂಲಕ ಇಂದಿನಿಂದಲೇ ಜಾರಿಗೆ ಬಂದಿದೆ.

ಸರ್ಕಾರದ ಈ ನಿರ್ಧಾರದಿಂದ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ನೂರಾರು ಮಂದಿ ವಿದ್ಯುತ್ ಸಂಪರ್ಕ ಪಡೆಯಲು ಸಹಕಾರಿಯಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಬಿಲ್ಡರ್ ಗಳು ಬೆಸ್ಕಾಂ ಅಧಿಕಾರಿಗಳಿಗೆ ಲಂಚ ನೀಡುವಂತಹ ಸನ್ನಿವೇಶಕ್ಕೂ ಸರ್ಕಾರದ ಈ ಆದೇಶದಿಂದ ಕಡಿವಾಣ ಬಿದ್ದಂತಾಗಿದೆ ಈ ಐತಿಹಾಸಿಕ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ,ಅಭಿನಂದನೆ ಸಲ್ಲಿಸಿದರು.

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button