5ನೇ ರಾಷ್ಟ್ರೀಯ ಟೆನ್ನಿಸ್ ವಾಲಿಬಾಲ್ ಚಾಂಪಿಯನ್ ಶಿಪ್-2022

5ನೇ ರಾಷ್ಟ್ರೀಯ ಟೆನ್ನಿಸ್ ವಾಲಿಬಾಲ್ ಚಾಂಪಿಯನ್ ಶಿಪ್-2022
ಕರ್ನಾಟಕ ಟೆನ್ನಿಸ್ ವಾಲಿಬಾಲ್ ಆಸೋಸಿಯೇಷನ್ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಬಾಲಕ,ಬಾಲಕಿಯರು ಮತ್ತು ಹಿರಿಯರ ವಿಭಾಗದಲ್ಲಿ 5ನೇ ರಾಷ್ಟ್ರೀಯ ಟೆನ್ಸಿಸ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿ ಇಂದು ಫೈನಲ್ ನಡೆಯಿತು.
ಹಿರಿಯ ರಾಜಕಾರಣಿ ಆರ್.ವಿ.ಹರೀಶ್ ರವರು ಕರ್ನಾಟಕ ಟೆನ್ಸಿಸ್ ವಾಲಿಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ವರ ರಾವ್,ತುಳಸಿರಾಮ್,ಕಿಶೋರ್ ,ಶ್ರೀಕಾಂತ್ ,ಬಾಲಾಜಿರವರು ಗೆದ್ದ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ರಾಷ್ಟ್ರೀಯ ಟೆನ್ನಿಸ್ ವಾಲಿಬಾಲ್ ತಂಡದಲ್ಲಿ 12ರಾಜ್ಯಗಳ ತಂಡ ಭಾಗವಹಿಸಿತ್ತು .
ದೆಹಲಿ,ಕರ್ನಾಟಕ,
ಮಹಾರಾಷ್ಟ್ರ,ಪಾಂಡಿಚೇರಿ,
ಓರಿಸ್ಸಾ,ಕೇರಳ, ಗುಜರಾತ್,ಮಧ್ಯಪ್ರದೇಶ,
ಆಂಧ್ರಪ್ರದೇಶ,ಮಣಿಪುರ,ತೆಲಂಗಾಣ ರಾಜ್ಯದ ಕಿರಿಯ ಮತ್ತು ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದರು
ಗೆದ್ದ ತಂಡಗಳು ಪುರುಷರ ತಂಡದಲ್ಲಿ ಮೊದಲನೇಯ ಸ್ಥಾನ ಪಾಂಡಿಚೇರಿ,ದ್ವೀತಿಯ ಮಹಾರಾಷ್ಟ್ರ,ತೃತೀಯ ಗುಜರಾತ್.
ಮಹಿಳೆಯರು ಪ್ರಥಮ ಸ್ಥಾನ ಮಹಾರಾಷ್ಟ್ರ,ದ್ವೀತಿಯ ಸ್ಥಾನ ಗುಜರಾತ್,ತೃತೀಯ ಸ್ಥಾನ ಗುಜರಾತ್.
ಮಿಕ್ಸ್ ಡಬ್ಬಲ್ಸ್ ನಲ್ಲಿ ಪ್ರಥಮ ಸ್ಥಾನ ಕೇರಳ,ದ್ವೀತಿಯ ಆಂಧ್ರಪ್ರದೇಶ,ತೃತೀಯ ಮಹಾರಾಷ್ಟ್ರ ತಂಡಗಳು ವಿಜೇತರಾದರು


















